ಜನರಲ್

ಸರ್ಕಾರಿ ಆದೇಶ ಸಂ. ಸಿಆಸುಇ 164 ಸಉಸೇ 2016, ದಿನಾಂಕ: 24-09-2016 ರ ಅನ್ವಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯನ್ನು ಹೊಸದಾಗಿ ರಚಿಸಲಾಗಿದೆ. ಈ ಇಲಾಖೆಯು ನೇರವಾಗಿ ಮಾನ್ಯ ಮುಖ್ಯಮಂತ್ರಿಗಳ ಅಧೀನದಲ್ಲಿರುತ್ತದೆ. ಉದ್ಯೋಗಶೀಲತೆ ಹೆಚ್ಚಿಸಲು ವಿವಿಧ ಕ್ಷೇತ್ರಗಳಲ್ಲಿ ಮತ್ತು ಉದ್ಯೋಗ ಕಾರ್ಯ ವ್ಯಾಪ್ತಿಗಳಲ್ಲಿ ಕೌಶಲ್ಯ ಪಡೆಯಲು ಆಸಕ್ತಿ ಹೊಂದಿರುವ ಪ್ರತಿಯೊಬ್ಬ ನಾಗರೀಕರಿಗೆ ಪ್ರಯೋಜನ ಒದಗಿಸುವ ಗುರಿಯೊಂದಿಗೆ ಈ ಇಲಾಖೆಯನ್ನು ರಚಿಸಲಾಗಿದೆ.
ಕೌಶಲ್ಯ ಅಭಿವೃದ್ಧಿಯ ಮೂಲಕ ಯುವಜನತೆಯ ಉದ್ಯೋಗಶೀಲತೆ ವರ್ದಿಸುವ ನೈಪುಣ್ಯತೆಗಳನ್ನು ಒದಗಿಸಲು ಆದ್ಯಗಮನ ನೀಡುವ ಸಲುವಾಗಿ `ಕೌಶಲ್ಯ ಕರ್ನಾಟಕ ಮಿಷನ್’ ರಚಿಸಲಾಗಿದೆ. ಕೌಶಲ್ಯ ಕರ್ನಾಟಕ ಮಿಷನ್ ಕೌಶಲ್ಯಯುಕ್ತ ಮಾನವ ಸಂಪನ್ಮೂಲದ ಬೇಡಿಕೆ ಮತ್ತು ಪೂರೈಕೆಗಳ ಅಂತರವನ್ನು ರಾಜ್ಯದ ಎಲ್ಲಾ ಕೌಶಲ್ಯ ಅಭಿವೃದ್ಧಿ ಪ್ರಯತ್ನಗಳ ಸಹಕಾರ ಹಾಗೂ ಸಮಗ್ರಗೊಳಿಸುವ ಮೂಲಕ ಅಂತರವನ್ನು ಕಡಿತಗೊಳಿಸುವ ಜವಾಬ್ದಾರಿ ಹೊಂದಿರುತ್ತದೆ. ಅಲ್ಲದೆ, ವೃತ್ತಿ ಮತ್ತು ತಾಂತ್ರಿಕ ತರಬೇತಿ ಚೌಕಟ್ಟು, ಕೌಶಲ್ಯ ಉನ್ನತೀಕರಣ, ಹೊಸ ಕೌಶಲ್ಯಗಳ ಅಭಿವೃದ್ಧಿ ಇತ್ಯಾದಿಗಳ ಜವಾಬ್ದಾರಿಯನ್ನು ಸಹ ಹೊಂದಿರುತ್ತದೆ. ಕೌಶಲ್ಯಗಳನ್ನು ಪರಿಣಾಮಕಾರಿಯಾಗಿ ನೀಡುವ ಗುರಿ ಹೊಂದಿದ್ದು, ಉತ್ತಮ ಅಭ್ಯಾಸಗಳನ್ನು ಮುಂದುವರೆಸುವ ಮೂಲಕ ‘ಕೌಶಲ್ಯ ಕರ್ನಾಟಕ’ ದ ಉದ್ದೇಶಿತ ‘ವಿಷನ್’ ಸಾಧಿಸಲು ಕೌಶಲ್ಯ ಕರ್ನಾಟಕ ಮಿಷನ್ ಕ್ರಮ ವಹಿಸಲಿದೆ.
Kaushalkar.com ಒಂದು ಏಕಗವಾಕ್ಷಿ ಐ.ಟಿ. ಅಪ್ಲಿಕೇಷನ್ ಆಗಿದೆ. ಇದು ಇ-ಕಲಿಕೆ, ಪ್ರಶಿಕ್ಷಣಾರ್ಥಿಗಳ (Trainees) ಮತ್ತು ತರಬೇತುದಾರರ ನೋಂದಣಿ, ತರಬೇತಿ ಸಂಸ್ಥೆಗಳ ನೋಂದಣಿ ಅವಕಾಶ ಒದಗಿಸುತ್ತಿದೆ. ಅಲ್ಲದೆ, ಕೌಶಲ್ಯ ಪರಿಸರದಲ್ಲಿನ ತರಬೇತಿ ಸಂಸ್ಥೆಗಳು, ಅವುಗಳ ಮಾನ್ಯತೆ, ಸಂಯೋಜನೆ ಮತ್ತು ನಿರಂತರ ಪರ್ಯವೇಕ್ಷಣೆ ಮಾಡಲಿದೆ.
ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಮಂತ್ರಾಲಯದಡಿಯಲ್ಲಿನ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮವು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಒಂದು ಸಂಸ್ಥೆ. ಅಪಾರ ಸಂಖ್ಯೆಯ ಗುಣಮಟ್ಟದ ಮತ್ತು ಲಾಭದಾಯಕ ವೃತ್ತಿ ಶಿಕ್ಷಣ ಸಂಸ್ಥೆಗಳನ್ನು ಸೃಜಿಸುವ ಮೂಲಕ ಕೌಶಲ್ಯಾಭಿವೃದ್ಧಿಯನ್ನು ವೇಗಗೊಳಿಸಲಾಗುವುದು. ಆರ್ಥಿಕವಾಗಿ ಸ್ವಾವಲಂಬಿಯಾಗುವ ವೃತ್ತಿ ತರಬೇತಿ ಕಾರ್ಯಕ್ರಮಗಳನ್ನು ಎಲ್ಲೆಡೆ ಪ್ರಾರಂಭಿಸಲು ಈ ನಿಗಮವು ಆರ್ಥಿಕ ನೆರವು ನೀಡುತ್ತದೆ. ಈ ಸಂಸ್ಥೆಯು ಗುಣಮಟ್ಟ, ಮಾಹಿತಿ ವ್ಯವಸ್ಥೆ ಮತ್ತು ತರಬೇತುದಾರರ ತರಬೇತಿ ಕಾರ್ಯಗಳನ್ನು ನೇರವಾಗಿ ಅಥವಾ ಸಹಭಾಗಿತ್ವದಲ್ಲಿ ಜಾರಿಗೊಳಿಸುವ ಜವಾಬ್ದಾರಿ ಹೊಂದಿರುತ್ತದೆ. ಕೌಶಲ್ಯ ತರಬೇತಿ ನೀಡುವ ಉದ್ಯಮ/ಸಂಸ್ಥೆಗಳಿಗೆ ಹಣಕಾಸು ನೆರವು ನೀಡುವ ಮೂಲಕ ಕೌಶಲ್ಯಾಭಿವೃದ್ಧಿಯನ್ನು ವೇಗೋತ್ಕರ್ಷಗೊಳಿಸುವ ಕೌಶಲ್ಯಾಭಿವೃದ್ಧಿಯ ಖಾಸಗಿ ಕಾರ್ಯಕ್ರಮಗಳನ್ನು ಪುನಃಶ್ಚೇತನಗೊಳಿಸುವ ಮಾದರಿಯನ್ನು ಅಭಿವೃದ್ಧಿಪಡಿಸುವುದಾಗಿದೆ.
ಸೆಕ್ಟರ್ ಸ್ಕಿಲ್ ಕೌನ್ಸಿಲ್ (ಕ್ಷೇತ್ರವಾರು ಕೌಶಲ್ಯ ಪರಿಷತ್ತು) ಗಳು ಉದ್ಯಮ - ನೇತೃತ್ವದ ಸಂಸ್ಥೆಗಳಾಗಿದ್ದು, ಸಂಬಂಧಿಸಿದ ಕ್ಷೇತ್ರವಾರು ಉದ್ಯಮಗಳಿಗೆ ಅಗತ್ಯವಾದ ಕೌಶಲ್ಯಗಳು ಪರಿಕಲ್ಪನೆ, ಪ್ರಕ್ರಿಯೆ, ಪ್ರಮಾಣೀಕರಣ ಮತ್ತು ಮಾನ್ಯತೆ ಇತ್ಯಾದಿಗಳನ್ನು ವ್ಯಾಖ್ಯಾನ ಮಾಡುವುದು ಇವುಗಳ ಜವಾಬ್ದಾರಿಯಾಗಿರುತ್ತದೆ. ಆಯಾ ಉದ್ಯಮಗಳಿಗೆ ಸಂಬಂಧಿತ ಉದ್ಯೋಗಗಳ ಕಾರ್ಯವ್ಯಾಪ್ತಿಗೆ ಬೇಕಾದ ರಾಷ್ಟ್ರೀಯ ವೃತ್ತಿ ಗುಣಮಟ್ಟ (NOS) ಮತ್ತು ವಿದ್ಯಾರ್ಹತೆ ಗುಂಪು (QPs) ಗಳನ್ನು ಎಸ್.ಎಸ್.ಸಿ. ನಿಗಧಿಪಡಿಸುತ್ತದೆ ಹಾಗೂ ಅವು ರಾಷ್ಟ್ರೀಯ ಕೌಶಲ್ಯ ವಿದ್ಯಾರ್ಹತೆ ಚೌಕಟ್ಟಿಗೆ ಅನುಗುಣವಾಗಿದೆಯೇ ಎಂಬುದನ್ನು ಖಾತ್ರಿಪಡಿಸುತ್ತದೆ.
ಇದೊಂದು ಮೊಬೈಲ್ ಆಪ್ ಆಗಿದ್ದು ಅದನ್ನು ‘ ಆನ್ಡ್ರಾಯಿಡ್ ಸ್ಮಾರ್ಟ್ ಪೋನ್’ ನಲ್ಲಿ ಡೌನ್ಲೋಡ್ ಮಾಡಿಕೊಂಡು ನೋಂದಾಯಿಸಿಕೊಳ್ಳಬೇಕು.
ಆಧಾರ್ ಸಂಖ್ಯೆ ಹೊಂದಿರುವ ಕರ್ನಾಟಕದ ಆಸಕ್ತ 18 ರಿಂದ 35 ವಯೋಮಿತಿಯೊಳಗಿನ ಯುವಕ/ಯುವತಿಯರು ಅನಕ್ಷರಸ್ತರು/ ಶಾಲೆ ಬಿಟ್ಟಿರುವ / 10ನೇ ತರಗತಿ/ ಪಿ.ಯು.ಸಿ ಪಾಸ್/ಫೇಲ್, ಪದವೀಧರರು.
ಕರ್ನಾಟಕ ಕೌಶಲ್ಯ ಮಿಷನ್ ನಲ್ಲಿ ನೋಂದಾಯಿತ ಪಟ್ಟಿಯಲ್ಲಿರುವ ತರಬೇತಿಯನ್ನು ಕೊಡುವಲ್ಲಿ ಪ್ರಾವಿಣ್ಯತೆ ಹೊಂದಿರುವ ಖಾಸಗಿ ತರಬೇತಿ ಪಾಲುದಾರರಿಂದ ವಿವಿಧ ಕೇಂದ್ರಗಳಲ್ಲಿ ತರಬೇತಿ ನೀಡಲಾಗುವುದು.
ರಾಷ್ಟ್ರೀಯ ಕೌಶಲ್ಯ ವಿದ್ಯಾರ್ಹತೆಯ ಚೌಕಟ್ಟಿಗೆ ಅನುಗುಣವಾಗಿ ‘ಸೆಕ್ಟರ್ ಸ್ಕಿಲ್ ಕೌನ್ಸಿಲ್’ ನಿಗಧಿಪಡಿಸಿರುವ ತರಬೇತಿಯ ಮಟ್ಟಕ್ಕೆ ಅನುಸಾರವಾಗಿ ತರಬೇತಿಯು 3-6 ತಿಂಗಳ ಅವಧಿಯದ್ದಾಗಿತ್ತದೆ.

ಟಿ.ಪಿ/ಟಿ.ಸಿ.

ನಿಗಧಿತ ಮೂಲಭೂತ ಸೌಕರ್ಯಗಳು ಮತ್ತು ಸಂಪನ್ಮೂಲಗಳನ್ನು ಹೊಂದಿರುವ ಯಾವುದೇ ತರಬೇತಿ ಘಟಕದ ಏಜೆನ್ಸಿಗಳು ನೋಂದಾಯಿಸಿಕೊಳ್ಳಬಹುದು. ನೋಂದಾಯಿಸಿಕೊಂಡ ನಂತರ ತರಬೇತಿ ಪಾಲುದಾರ(TP) ರು ವೆಬ್ ಪೋರ್ಟಲ್ನಲ್ಲಿ ಮಿಂಚಂಚೆ ಮೂಲಕ ಕಳುಹಿಸಿರುವ ಅಧಿಕಾರ ಪತ್ರದ ಮೂಲಕ ಲಾಗಿನ್ ಆಗಿ ತರಬೇತಿ ಕೇಂದ್ರ ಅರ್ಜಿ ನಮೂನೆ (TCAF) ಯನ್ನು ಆನ್ಲೈನ್ ಮೂಲಕ ಭರ್ತಿ ಮಾಡಬೇಕು. ತರಬೇತಿ ಸಂಸ್ಥೆಯು ಕೌಶಲ್ಯ ತರಬೇತಿ ನೀಡಲು ಮಾನ್ಯತೆ ಹೊಂದಿರಬೇಕು.
ಟ್ರೈನಿಂಗ್ ಪ್ರೊವೈಡರ್ ಆಗಿ ನೋಂದಾಯಿಸಿಕೊಂಡ ನಂತರ ಇ-ಮೇಲ್ ಮೂಲಕ ಕಳುಹಿಸಲಾಗುವ ರುಜುವಾತುಗಳನ್ನು ಉಪಯೋಗಿಸಿ `Login’ ಆಗುವ ಮೂಲಕ ತರಬೇತಿ ಕೇಂದ್ರ (T C) ವನ್ನು ಆನ್ಲೈನ್ ನಲ್ಲಿ ತರಬೇತಿ ಕೇಂದ್ರದ ಅರ್ಜಿ ನಮೂನೆ (TCAF) ಭರ್ತಿ ಮಾಡಿಕೊಳ್ಳುವ ಮೂಲಕ ನೋಂದಾಯಿಸಕೊಳ್ಳಬಹುದಾಗಿದೆ.
ಇಲ್ಲ. ಮೊದಲಿಗೆ `Training Provider’ ಆಗಿ ನೋಂದಾಯಿಸಬೇಕು. ನೇರವಾಗಿ Training Centre ನೋಂದಾಯಿಸುವ ಅವಕಾಶ ಇರುವುದಿಲ್ಲ.
ಅಗತ್ಯವಿದೆ. ಕೌಶಲ್ಯ ತರಬೇತಿ ನೀಡಲು ತರಬೇತಿ ಕೇಂದ್ರಕ್ಕೆ ಮಾನ್ಯತೆಯ ಅಗತ್ಯವಿದೆ.
ತರಬೇತಿ ಕೇಂದ್ರ ನೀಡುವ ಅರ್ಜಿಯಲ್ಲಿನ ವಿವರಗಳನ್ನು ಪರಿಶೀಲನಾ ಸಂಸ್ಥೆ, ತರಬೇತಿ ಕೇಂದ್ರಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿ, ಮಾನ್ಯತೆ ನೀಡಬಹುದೆ ಅಥವಾ ಇಲ್ಲವೆ ಎನ್ನುವುದರ ಬಗ್ಗೆ ಶಿಫಾರಸ್ಸು ಮಾಡಲಿದೆ. ತರಬೇತಿ ಕೇಂದ್ರ ನೀಡಿರುವ ಮಾಹಿತಿ ಸರಿ ಇಲ್ಲದಿದ್ದಲ್ಲಿ, ಮಾನ್ಯತೆಗೆ ಶಿಫಾರಸ್ಸು ಮಾಡುವುದಿಲ್ಲ. ತರಬೇತಿ ಕೇಂದ್ರವನ್ನು ಮೌಲ್ಯೀಕರಿಸಲು ತರಬೇತಿ ಕೊಠಡಿ, ಪ್ರಯೋಗಶಾಲೆ, ಗ್ರಂಥಾಲಯ, ತರಬೇತಿದಾರರು, ಸಿಬ್ಬಂದಿ ಮತ್ತು ಇತರೆ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗುವುದು. ಪರಿಶೀಲನಾ ಸಂಸ್ಥೆಯು ಮಾಡುವ ಪರಿಶೀಲನೆ ಮತ್ತು ಪ್ರಕ್ರಿಯೆಯನ್ನು geo-ಣಚಿg ಮತ್ತು ಸಮಯ ಮುದ್ರಣದೊಂದಿಗೆ ತೆಗೆದ ಚಿತ್ರವನ್ನು ಅಪ್ಲೋಡ್ ಮಾಡಬೇಕಾಗಿರುತ್ತದೆ.
`ಸಿದ್ದ’ ಎಂದರೆ ತರಬೇತಿ ಕೇಂದ್ರ (T C) ಮಾನ್ಯತೆ ಪಡೆಯಲು ನಿಗಧಿತ ಮಾನದಂಡಗಳನ್ನು ಅನುಸರಿಸಿರುತ್ತಾರೆ. `ಸಿದ್ದವಾಗಿರುವುದಿಲ್ಲ’ ಎಂದರೆ ಮಾನ್ಯತೆ ಪಡೆಯಲು ನಿಗದಿತ ಮಾನದಂಡಗಳನ್ನು ಅನುಸರಿಸಲಾಗಿರುವುದಿಲ್ಲ.
‘On Site’ ಪರಿಶೀಲನಾ ದಿನಾಂಕವನ್ನು ಪರಿಶೀಲನಾ ಏಜೆನ್ಸಿ ನೀಡಲಿದೆ. ಆದಾಗ್ಯೂ, ತರಬೇತಿ ಕೇಂದ್ರ ಪರಿಶೀಲನಾ ದಿನಾಂಕವನ್ನು ಒಂದು ಸಲ ಮಾರ್ಪಡಿಸುವಂತೆ ಕೋರಲು ಅವಕಾಶವಿರುತ್ತದೆ.
ಬಾಡಿಗೆ ಅಥವಾ ಗುತ್ತಿಗೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ತರಬೇತಿ ಕೇಂದ್ರವು ವಿಳಾಸ ಪುರಾವೆಗಾಗಿ rent/ lease agreement ಅನ್ನು ಕೇಂದ್ರ ಮಾನ್ಯತೆಗಾಗಿ ಸಲ್ಲಿಸುವ ಅರ್ಜಿಗೆ ಅಪ್ಲೋಡ್ ಮಾಡಬಹುದು. ಬಾಡಿಗೆ ಕರಾರು ತರಬೇತಿ ಕೇಂದ್ರದ ಮಾಲೀಕರು ಹಾಗೂ ಕಟ್ಟಡದ ಮಾಲೀಕರ ನಡುವೆ ಅಗಿರಬೇಕು.
ಕಾರ್ಯ ವ್ಯಾಪ್ತಿಗೆ ಅನುಗುಣವಾಗಿ ತರಬೇತಿ ಕೊಠಡಿಯನ್ನು ಪ್ರಯೋಗ ಶಾಲೆಯನ್ನಾಗಿ ಉಪಯೋಗಿಸಬಹುದು. ಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ತರಬೇತಿಗೆ ಬೇಕಾಗುವ ಸಾಧನ ಸಾಮಗ್ರಿಗಳ ವಿವರಗಳು ವೆಬ್ಸೈಟ್ನಲ್ಲಿ ದೊರಕುತ್ತವೆ. ಅವುಗಳನ್ನು ಪಡೆದುಕೊಳ್ಳಲು ಇಲ್ಲಿ ಕ್ಲಿಕ್ ಮಾಡುವುದು.
ಮಾನ್ಯತೆಗೆ ಬೇಡಿಕೆ ಸಲ್ಲಿಸುವುದು ಐಚ್ಚಿಕ. ತರಬೇತಿ ನೀಡುವ ಯಾವುದೇ ತರಬೇತಿ ಸಂಸ್ಥೆ ಕರ್ನಾಟಕ ಕೌಶಲ್ಯ ಮಿಷನ್ (KKM) ನೊಂದಿಗೆ ಜೋಡಿಸಲಾಗುವುದು.
ಪರಿಶೀಲನಾ ಸಂಸ್ಥೆ/ಏಜೆನ್ಸಿ ಅಥವಾ ಮೂರನೇ ತರಬೇತಿ ಸಂಸ್ಥೆಯು ಸ್ವತಂತ್ರ ಸಂಸ್ಥೆಯಾಗಿದ್ದು, ತರಬೇತಿ ಕೇಂದ್ರಕ್ಕೆ ನಿಗಧಿಪಡಿಸಿರುವ ಮಾನದಂಡಗಳ ಮೌಲ್ಯಮಾಪನವನ್ನು ಮಾಡುವ ಜವಾಬ್ದಾರಿ ಹೊಂದಿರುತ್ತದೆ. ಮಾನ್ಯತೆ ಮಾನದಂಡಗಳು ಹೊಂದಿದ್ದಲ್ಲಿ ಅವುಗಳನ್ನು ಪರಿಶೀಲಿಸಲು ಪರಿಶೀಲನಾ ಏಜೆನ್ಸಿ ತರಬೇತಿ ಕೇಂದ್ರಕ್ಕೆ ಬೇಟಿ ನೀಡುತ್ತದೆ.
ರಾಷ್ಟ್ರೀಯ ಕೌಶಲ್ಯ ವಿದ್ಯಾರ್ಹತೆಯ ಚೌಕಟ್ಟಿಗೆ ಅನುಗುಣವಾಗಿ ‘ಸೆಕ್ಟರ್ ಸ್ಕಿಲ್ ಕೌನ್ಸಿಲ್’ ನಿಗಧಿಪಡಿಸಿರುವ ತರಬೇತಿಯ ಮಟ್ಟಕ್ಕೆ ಅನುಸಾರವಾಗಿ ತರಬೇತಿಯು 3-6 ತಿಂಗಳ ಅವಧಿಯದ್ದಾಗಿರುತ್ತದೆ. ತರಬೇತಿ ನಂತರ ಮೌಲ್ಯಾಂಕನ, ಪ್ರಮಾಣಿಕರಣ ಮತ್ತು ಉದ್ಯೋಗ ಸಹಾಯ ಒದಗಿಸಲಾಗುವುದು.
ನಿಗಧಿತ ಮೂಲಭೂತ ಸೌಕರ್ಯಗಳು ಮತ್ತು ಸಂಪನ್ಮೂಲಗಳನ್ನು ಹೊಂದಿರುವ ಯಾವುದೇ ತರಬೇತಿ ಘಟಕದ ಏಜೆನ್ಸಿಗಳು ನೋಂದಾಯಿಸಿಕೊಳ್ಳಬಹುದು. ನೋಂದಾಯಿಸಿಕೊಂಡ ನಂತರ ತರಬೇತಿ ಪಾಲುದಾರ (TP)ರು ಮಿಂಚಂಚೆ ಮೂಲಕ ಕಳುಹಿಸುವ ರುಜುವಾತುಗಳ ಮೂಲಕ `ಲಾಗಿನ್’ ಆಗಿ ತರಬೇತಿ ಕೇಂದ್ರ ಅರ್ಜಿ ನಮೂನೆ ಯನ್ನು ಆನ್ಲೈನ್ ಮೂಲಕ ಭರ್ತಿ ಮಾಡಬೇಕು. ತರಬೇತಿ ಸಂಸ್ಥೆಯು ಕೌಶಲ್ಯ ತರಬೇತಿ ನೀಡಲು ಮಾನ್ಯತೆ ಹೊಂದಿರಬೇಕು.

ತರಬೇತಾರ್ಥಿ

ನೈಪುಣ್ಯತೆ ಹೊಂದಲು ಅಪೇಕ್ಷಿಸುವ ಯಾವುದೇ ವ್ಯಕ್ತಿ-ಸಂಬಾವ್ಯ ತರಬೇತಾರ್ಥಿ.
ತರಬೇತಾರ್ಥಿಯಾಗಿ ದಾಖಲು ಮಾಡಲು kaushalkar.com ವೆಬ್ ಪೋರ್ಟಲ್ಗೆ ಲಾಗಿನ್ ಆಗುವುದು ಹಾಗೂ ‘ಟ್ರೈನಿ ರಿಜಿಸ್ಟ್ರೇಷನ್’ ಲಿಂಕ್ ಅನ್ನು ಕ್ಲಿಕ್ ಮಾಡುವುದು. ಮುಂದಿನ ಮಾಹಿತಿಗೆ `Info Centre’ ಮೇಲೆ ಕ್ಲಿಕ್ ಮಾಡಿ `How to register as a trainee ’ ಲಿಂಕ್ ಆಯ್ಕೆ ಮಾಡಿಕೊಳ್ಳುವುದು.
ಅಭ್ಯರ್ಥಿ ಸದರಿ ಪೋರ್ಟಲ್ ನಲ್ಲಿ ಅವಶ್ಯಕ ಮಾಹಿತಿಯೊಂದಿಗೆ ದಾಖಲಿಸಿಕೊಂಡಲ್ಲಿ, ಅವರು ವಿವಿಧ ತರಬೇತಿ ಸಂಸ್ಥೆಗಳ ಮೂಲಕ ರಾಜ್ಯ ಸರ್ಕಾರದ ವಿವಿಧ ಸ್ಕೀಂ ಅಡಿಯಲ್ಲಿ ನೀಡಲಾಗುವ ಕೌಶಲ್ಯ ತರಬೇತಿ ಪಡೆಯಲು ಅರ್ಹರಾಗುತ್ತಾರೆ.
ಉದ್ಯೋಗ ಕಾರ್ಯವ್ಯಾಪ್ತಿ ಆಧರಿಸಿ ಈ ತರಬೇತಿಗಳನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಓSಕಿಈ ಅನುಸರಣೆ ಹೊಂದಿರುತ್ತದೆ. ತರಬೇತಾರ್ಥಿ ಉದ್ಯೋಗ ಪಡೆಯಲು ಅಥವಾ ಸ್ವಯಂ ಉದ್ಯೋಗಿಯಾಗಲು ಸಹಾಯವಾಗುವಂತೆ ಈ ತರಬೇತಿಗಳನ್ನು ವಿನ್ಯಾಸಗೊಳಿಸಿದೆ.
ರಾಷ್ಟ್ರೀಯ ಕೌಶಲ್ಯಗಳ ವಿದ್ಯಾರ್ಹತೆಗಳ ಚೌಕಟ್ಟು(NSQF) – ಇದೊಂದು ಸಾಮಥ್ರ್ಯ ಆಧಾರಿತ ಚೌಕಟ್ಟು ಆಗಿದ್ದು, ಎಲ್ಲಾ ವಿದ್ಯಾರ್ಹತೆಗಳನ್ನು ಜ್ಞಾನದ ಹಂತಗಳ, ಕೌಶಲ್ಯಗಳು ಮತ್ತು ಆಸಕ್ತಿಗಳನ್ನು ಆಧರಿಸಿ ಆಯೋಜಿಸುತ್ತದೆ. ಈ ಹಂತಗಳನ್ನು 1 ರಿಂದ 10 ರವರೆಗೆ (1-10) ಶ್ರೇಣೀಕರಿಸಲಾಗಿದೆ ಮತ್ತು ಅವುಗಳನ್ನು ಕಲಿಕೆ ಫಲಿತಾಂಶದ ಪ್ರಕಾರವಾಗಿ ವಿವರಿಸುತ್ತದೆ. ಹಾಗೂ ಕಲಿಕೆದಾರ, ಔಪಚಾರಿಕ, ಅಥವಾ ಅನೌಪಚಾರಿಕ ಕಲಿಕೆ ಮೂಲಕ ಪಡೆದಿದ್ದರು ಸಹ ಅದಕ್ಕೆ ಸಂಬಂದವಿಲ್ಲದೆ ಕಲಿಕೆದಾರ ಮೇಲೆ ತಿಳಿಸಿದ ಪ್ರಕಾರ ಹೊಂದಿರಬೇಕು.

NSQF ಅನ್ನು ಭಾರತದಲ್ಲಿ 27ನೇ ಡಿಸೆಂಬರ್ 2013 ರಂದು ಅಧಿಸೂಚಿಸಲಾಗಿದೆ. ಮಾನವ ಸಂಪನ್ಮೂಲ ಸಚಿವಾಲಯ ಬಿಡುಗಡೆ ಮಾಡಿರುವ NVEQF ಸೇರಿದಂತೆ, ಎಲ್ಲಾ ಇತರೆ ಚೌಕಟ್ಟುಗಳನ್ನು NSQF ಸೂಪರ್ಸೀಡ್ ಮಾಡಿರುತ್ತದೆ. ಕಲಿಕೆದಾರ ಯಾವುದೇ ಹಂತದಲ್ಲಿ ಬೇಕಾದ ಸಾಮಥ್ರ್ಯದ ಪ್ರಮಾಣಿಕರಣವನ್ನು ಔಪಚಾರಿಕ ಅಥವಾ ಅನೌಪಚಾರಿಕ ಕಲಿಕೆಯ ಮೂಲಕ ಅರ್ಜಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ NSQF ಒಂದು ಗುಣಮಟ್ಟ ಭರವಸೆ ಚೌಕಟ್ಟು. ಪ್ರಸ್ತುತ 100 ದೇಶಗಳು NSQF ಹೊಂದಿರುತ್ತವೆ ಅಥವಾ ಹೊಂದುವ ಪ್ರಕ್ರಿಯೆಯಲ್ಲಿರುತ್ತವೆ.
ಕಾರ್ಯವ್ಯಾಪ್ತಿಗೆ ಅನುಗುಣವಾಗಿ ಒಬ್ಬರು ಆಯ್ಕೆ ಮಾಡುವ ಕೌಶಲ್ಯಕ್ಕೆ ತಕ್ಕಂತೆ ತರಬೇತಾರ್ಥಿಯ ವಿದ್ಯಾರ್ಹತೆಯು ಅವಲಂಬಿಸಿರುತ್ತದೆ. ಇದು ವಿದ್ಯುಕ್ತವಲ್ಲದ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ವ್ಯಾಪಿಸಿರುತ್ತದೆ.
ಕ್ಷೇತ್ರ (ಸೆಕ್ಟರ್) ಅಥವಾ ಕ್ಷೇತ್ರ ಕೌಶಲ್ಯ ಪರಿಷತ್ತು (ಸೆಕ್ಟರ್ ಸ್ಕಿಲ್ ಕೌನ್ಸಿಲ್ಸ್) ಗಳು ಕೈಗಾರಿಕೆಗಳು ನಡೆಸುವ ನಿಗಮ ಇದು ಸಂಬಂಧಿಸಿದ ಕೈಗಾರಿಕೆಗಳಿಗೆ ಬೇಕಾಗುವ ಕೌಶಲ್ಯಗಳ ನಿರ್ಧಾರ, ಪರಿಕಲ್ಪನೆ, ಪ್ರಮಾಣೀಕರಣ ಮತ್ತು ಮಾನ್ಯತೆ ಕೊಡುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಕ್ಷೇತ್ರವಾರು ಕೌಶಲ್ಯ ಪರಿಷತ್ತು ರಾಷ್ಟ್ರೀಯ ವೃತ್ತಿ ಗುಣಮಟ್ಟ ಮತ್ತು ವಿದ್ಯಾರ್ಹತೆ ಗುಂಪು ಆಯಾ ಕೈಗಾರಿಕೆಗಳಿಗೆ ಸಂಬಂಧಿತ ಕಾರ್ಯವ್ಯಾಪ್ತಿಯನ್ನು ನಿಗಧಿಪಡಿಸುತ್ತದೆ. ಮತ್ತು ಅವು ರಾಷ್ಟ್ರೀಯ ಕೌಶಲ್ಯ ವಿದ್ಯಾರ್ಹತೆ ಚೌಕಟ್ಟಿಗೆ ಅನುಗುಣವಾಗಿದೆಯೆ ಎಂಬುದನ್ನು ಖಾತ್ರಿಪಡಿಸುತ್ತದೆ.
ಒಬ್ಬರು ಒಂದು ಅವಧಿಯಲ್ಲಿ ಒಂದು ಕ್ಷೇತ್ರಕ್ಕೆ ಮಾತ್ರ ನೋಂದಾಯಿಸಿಕೊಳ್ಳಬಹುದು.
ಕೌಶಲ್ಯ ಆಧಾರದ ಮೇಲೆ ಹುದ್ದೆಯ ಪದನಾಮಕ್ಕೆ ಕಾರ್ಯವ್ಯಾಪ್ತಿಯನ್ನು ವ್ಯಾಖ್ಯಾನಿಸ ಬಹುದು. ಪ್ರತಿಯೊಂದು ಕೆಲಸದ ಕಾರ್ಯವ್ಯಾಪ್ತಿಯನ್ನು ಹುದ್ದೆಯ ಪದನಾಮ/ಕೌಶಲ್ಯದ ಜೊತೆ ಜೋಡಿಸಲಾಗಿದೆ.
ಒಬ್ಬನು ಒಂದು ಅವಧಿಯಲ್ಲಿ ಒಂದು ಕಾರ್ಯವ್ಯಾಪ್ತಿಗೆ ಮಾತ್ರ ನೋಂದಾಯಿಸಿಕೊಳ್ಳಬಹುದು.
ದಯಮಾಡಿ kaushalkar.com ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ಆರ್.ಪಿ.ಎಲ್. ಕೋರ್ಸುಗಳನ್ನು ನೋಡುವುದು.